ಈ ಬ್ಲಾಗಿನಲ್ಲಿ ಪ್ರೇಮ,ಕಾಮ,ಅಸಹ್ಯ,ಚಿಂತಕ,ನೋವು,ನಲಿವು,...ಎಲ್ಲವನ್ನು ಒಳಗೊಂಡ ಕಣ್ಣೀರು ಹರಿದಾಡುತ್ತದೆ..

ಬುಧವಾರ, ಏಪ್ರಿಲ್ 1, 2009

ವಿಧಿಸ್ವತ್ತಿನ ಮುನ್ನುಡಿ ಬರಹ

ನನ್ನ ಕಥೆ ಕೇಳಿದರೆ ಕಿವಿಯಲ್ಲಿ ರಕ್ತ ಬರಬಹುದು,ನನ್ನ ಕಥೆ ಓದಿದರೆ ಕಣ್ಣಲ್ಲಿ ರಕ್ತ ಬರಬಹುದು ಅಂತ ದುರಂತಕಥಾನಾಯಕ ನಾನು.

ಅದಕ್ಕಾಗಿ ಕೇವಲ ಮುನ್ನುಡಿಯನ್ನು ಮಾತ್ರ ನಿಮ್ಮ ಮುಂದಿಡುತ್ತಿರುವ ನೇರ-ನಿಷ್ಠುರ ನುಡಿಯ ಬಲಿಪಶು!
ವಿಧಿಸ್ವತ್ತಿನ ಮುನ್ನುಡಿ ಬರಹ:ನಾನು ಕೂಡ ಎಲ್ಲರಂತೆಯೇ ಏನೂ ಅರಿಯದ ಮುಗ್ದ ಮಗುವಿನಂತೆ ಈ ಭೂಮಿಗೆ ಬಂದೆ.ಬೆಳೆದಂತೆ ಆ ದೇವರು ಎಲ್ಲರಿಗೂ ನೀಡೋ ಹಾಗೆ ನನಗೂ ಅರಿಷಡ್ವರ್ಗಗಳಾದ ಕಾಮ,ಕ್ರೋಧ,ಮದ,ಮತ್ಸರ,ಮೋಹ ಮತ್ತು ಲೋಭ ಎಂಬ ಆರು ಹುಚ್ಚು ಕುದುರೆಗಳನ್ನು ಕಟ್ಟಿದ ಮನಸ್ಸು ಎಂಬ ರಥವನ್ನು ನೀಡಿದ.ಆದರೆ ಎಲ್ಲರಿಗೂ ಆ ರಥಕ್ಕೆ ಲಗಾಮು ನೀಡೋ ಹಾಗೆ ನನ್ನ ರಥಕ್ಕೆ ಲಗಾಮು ನೀಡುವುದನ್ನು ಆ ದೇವರು ಬಹುಶಃ ಮರೆತ ಅಂತ ಕಾಣುತ್ತೆ.ಜೊತೆಗೆ ವಿದ್ಯೆ ಮತ್ತು ಹಣವನ್ನು ನೀಡಿದ್ದ.! ಇವೆಲ್ಲ ಇರುವವನು ಹೇಗಿರಬಹುದು ಎಂದು ನೀವೇ ಊಹಿಸಿ.

ಒಂದು ಸುಂದರ ಓದೋ ಹುಡುಗಿ ನನ್ನ ಕಣ್ಣಿಗೆ ಬಿದ್ದಾಗ ನನ್ನ ವಿದ್ಯೆ ಅವಳಿಗಿಂತ ಮುಂದಿರಬೇಕು ಅಂತ ಹೇಳಿದರೆ ನನ್ನಲ್ಲಿ ಇದ್ದ ಅರಿಷಡ್ವರ್ಗಗಳು ಅವಳ ಮೋಹಕ ಚೆಲುವಿನ ಬಯಕೆಗೆ ಕಿಚ್ಚಿಡುತ್ತಿದ್ದವು, ಒಂದರ್ಥದಲ್ಲಿ ನಾನು "ಕಾಮತುರಾಣಾನಾಂ ಭಯಾನಂ ಲಜ್ಜಾಂ !" ಎಂಬಂತೆ ಆಗಿದ್ದೆ ಅನಿಸುತ್ತೆ.ಆದರೂ ಆ ದೇವರು ನನಗೆ ನೀಡಿದ್ದ ಕೆಲವು ಒಳ್ಳೆ ಅಂಶಗಳು ನನ್ನನ್ನ ಒಂದು ಮಟ್ಟಕ್ಕೆ ತಂದು ನಿಲ್ಲಿಸಿದ್ದವು.

ಇವೆಲ್ಲ ನಡೆದುದ್ದು ಒಂದು ಸುಂದರ ಹಳ್ಳಿಯ ಪರಿಸರದಲ್ಲಿ.!
ಉನ್ನತ ವಿದ್ಯಾಭ್ಯಾಸಕ್ಕೆಂದು ಕನಸುಗಳ ಜೊತೆಗೆ ಪಟ್ಟಣಕ್ಕೆ ಬಂದೆ.ಆದರೆ ಮೊದಲೇ ಕೆಟ್ಟ ವಿಧಿಯಾಟಕ್ಕೆ ಸಿಕ್ಕಿ ಸಿಲುಕುತ್ತಿದ್ದ ನನ್ನ ಪಾಪಿ ಹಣೆಬರಹಕ್ಕೆ ವಿದ್ಯಾರ್ಥಿ ದೆಸೆಯಲ್ಲೇ ರಾಹುದೆಸೆ ಅಡ್ಡಗಾಲು ಹಾಕಿ ನಿಂತಿತ್ತು,ಜೊತೆಗೆ ಪ್ರೀತಿಯ ಖಜಾನೆ ಹೊತ್ತು ಬಂದಿದ್ದ ನನಗೆ ಇಲ್ಲಿ ಸಿಕ್ಕಿದವರು ವಿಶ್ವಾಸಗಾತುಕ ಮಿತ್ರರು ಅವರು ಬಂದು ಪ್ರೀತಿಯನ್ನು ಹಂಚಿಕೊಳ್ಳದೆ ಅದನ್ನು ಖಾಲಿ ಮಾಡಿ ಮನಸ್ಸನ್ನು ಬರಿದು ಮಾಡಿ ಕೈ ಚೆಲ್ಲಿ ಹೊರಟರು.

ನಾನು ಇದಕ್ಕೆಲ್ಲ ಹಣೆಬರಹನೆ ಕಾರಣ ಎಂದುಕೊಂಡಿದ್ದೇನೆ!
ಆದರೂ ಕೊನೆಗಳಿಗೆಯಲ್ಲಿ ಕೈ ಹಿಡಿದ ದೇವರು ನನ್ನ ಕಣ್ಣೀರ ಕಡಲಲ್ಲಿ ಬರೆದಿದ್ದ ನನ್ನ ಕನಸಿನ ಚಿತ್ತಾರವನ್ನು ಅಲೆಗಳು ಬಂದು ಅಪ್ಪಳಿಸಿ ಅಳಿಸುವ ಮುನ್ನ ಹೃದಯ ಸಮುದ್ರದಲ್ಲಿ ಕಣ್ಣೀರನ್ನೇ ಬರಿದು ಮಾಡುವುದರ ಮೂಲಕ ಹಾಗೆಯೇ ಹಸಿರಾಗಿಸಿದ್ದಾನೆ.!

.....ಆದರೂ ಕೆಲವು ನೆನಪುಗಳು ಬೆಂಬಿಡದೆ ಕಾಡುತ್ತಲೇ ಇವೆ.
_____________________________________

ನಾನಾ ....?

ನನ್ನ ಫೋಟೋ
"ಜಗತ್ತಿನ ನಾಟಕರಂಗದಲ್ಲಿ ವಿಧಿಯ ಬರವಣಿಗೆಯನ್ನು ಮೀರುವವರು ಯಾರು?" ಅಂತ ಧೃಡವಾಗಿ ನಂಬಿರುವವನು ನಾನು! ನನ್ನಿಂದ ಏನೇ ಆದರೂ ಅದು ನಾನು ಮಾಡಿದ್ದಲ್ಲ,ನನ್ನ ಹಣೆಯಲ್ಲಿ ಬರೆದಿದ್ದುದು ಎಂದು ಹೇಳುವವನು ನಾನು.ಪುಂಗಿ ನಾದಕ್ಕೆ ತಲೆದೂಗಿ ನಡೆವ ನಾಗರಹಾವಂತೆ ,ವಿಧಿ ತೋರ್ಸೋ ದಾರಿಯಲ್ಲಿ ತಲೆ ತಗ್ಗಿಸಿ ನಡೆವ... ನಾನು ಹಣೆಬರಹದ ಮುಂದೆ ಏನು ಮಾಡಕ್ಕಾಗಲ್ಲ,ಹಣೆಲಿ ಏನ್ ಬರೆದಿರೋತ್ತು ಹಾಗೆ ಆಗಲೇ ಬೇಕು ಅದನ್ನ ಬದಲಾಯಿಸಲು ಹರಿ-ಬ್ರಹ್ಮಾದಿಗಳಿಂದಲೂ ಸಾದ್ಯವಿಲ್ಲ ಎಂಬುದು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಮನಸ್ಸು ಮಾಡಿದ್ರೆ ಏನು ಮಾಡಕ್ಕಾಗಲ್ಲ ,ಹಣೆಯಲ್ಲಿ ಬರೆದಿರಬೇಕು ಅನ್ನುವಷ್ಟರ ಮಟ್ಟಿಗೆ ನಾನು ತಲುಪಿದ್ದೇನೆ. ಯಾಕೆಂದರೆ.. ವಿಧಿಗೆ ಸವಾಲ್ ಹಾಕಿ ಕಂಡಿದ್ದು ಬರೀ ಸೋಲಿನ ಸಾಲು........ ನನ್ನೊಂದಿಗೆ:hanebaraha@gmail.com