ಈ ಬ್ಲಾಗಿನಲ್ಲಿ ಪ್ರೇಮ,ಕಾಮ,ಅಸಹ್ಯ,ಚಿಂತಕ,ನೋವು,ನಲಿವು,...ಎಲ್ಲವನ್ನು ಒಳಗೊಂಡ ಕಣ್ಣೀರು ಹರಿದಾಡುತ್ತದೆ..

ಬುಧವಾರ, ಜುಲೈ 29, 2009

'ನೆನಪನಾಲೆ '

ಅಮ್ಮ ದೃಷ್ಟಿ ತೆಗೆಯುವಾಗ ಸುಡುವ ಬಟ್ಟೆಯು ಹಾಯತಪ್ಪಿ ಕಾಲಮೇಲೆ ಬಿದ್ದು ಗಾಯ ಆಗಿರೋದು,ಅಪ್ಪ ಕೈ ಹಿಡಿದು ಬರೆಸುತ್ತಿದ್ದುದು,ನಾನು ಓದುತ್ತಿದ್ದ ಶಿಶುವಿಹಾರದ ಟೀಚರ್ ಕಂಡ ಕೂಡಲೇ ಅಡಗಿ ಕೂರುತ್ತಿದ್ದುದು,ಮನೆಮುಂದೆ ಕೂರುತ್ತಿದ್ದ ಹಿರಿಯರಿಗೆಲ್ಲ ಲಾರಿ ತಂದು ಹಾಯಿಸುವೆನೆಂದು ಬೆದರಿಕೆ ಹಾಕುತ್ತಿದ್ದುದು, ತಿಳಿಯದೆ ನಾಣ್ಯ ನುಂಗಿದ್ದು.....
ಅಪ್ಪ ಅವರು ಕೆಲಸ ಮಾಡುವ ಶಾಲೆಗೆ ಕರೆದುಕೊಂಡು ಹೋದಾಗ ಅಲ್ಲಿಯ ಪ್ರಾಂಶುಪಾಲರು ನನ್ನ ಪ್ರತಿಭೆ ಮೆಚ್ಚಿ ೫೦೦/- ರೂ. ಕೊಟ್ಟಿದ್ದು,ಯಾರೋ ಆಹಾರದಲ್ಲಿ ಮದ್ದು ಬೆರೆಸಿ ಕೊಟ್ಟು ಆರೋಗ್ಯ ಹದಗೆಟ್ಟಿದ್ದು,.....
ಪ್ರಾಥಮಿಕ ಶಾಲೆಗೆ ಸೇರಿದ್ದು,ಪ್ರತಿಭಾವಂತನೆಂದು ಹೆಸರು ಗಳಿಸಿದ್ದು,ಎಲ್ಲ ಮಾಸ್ತರರನ್ನು ಹಚ್ಚಿಕೊಂಡಿದ್ದು,ಗೋಲಿ ಆಡಿದ್ದು,ಚಿತ್ರನಟಿಯರನ್ನು ಪ್ರೀತಿಸಿದ್ದು,ಅಕ್ಕನ ಮಗಳನ್ನು ಮುದ್ದಾಡಿದ್ದು,.....
ಹೈಸ್ಕೂಲಿಗೆ ಸೇರಿದ್ದು,ಪೋಲಿ ಹುಡುಗರ ಸಹವಾಸ ಸೇರಿದ್ದು, ಜೊತೆಗೆ ವ್ಯವಸಾಯದ ಬೆನ್ನಿಗೆ ಬಿದ್ದಿದ್ದು,ರಜಾದಿನದಲ್ಲಿ ಆಡು ಮೇಯಿಸಲು ಹೋದಾಗ ಈಜು ಹೊಡೆಯುತ್ತಿದ್ದುದು,ರೈಲ್ವೆ ಹಳಿಯಲ್ಲಿ ಕಬ್ಬಿಣ ಹಾಯುತ್ತಿದ್ದುದು,ಇಸ್ಪೀಟ್ ಆಟ ಆಡುತ್ತಿದುದು,ಮುಂಜಾನೆಯೇ ಎದ್ದು ಹೊಲಕ್ಕೆ ನೀರು ಹಾಯಿಸುತ್ತಿದ್ದುದು.....
ಶಾಲೆಯಲ್ಲಿ ಮಾಸ್ತರರನ್ನು ರೇಗಿಸಿದ್ದು,ಬೆಂಚಿನ ಮೇಲೆ ಕೆತ್ತಿದ್ದು,ಅಹಂಕಾರಿ ಎಂಬ ಪಟ್ಟ ಪಡೆದಿದ್ದುದು,ಪ್ರತಿ ಸಭೆ ಸಮಾರಂಭದಲ್ಲೂ ಭಾಷಣ ಮಾಡುತ್ತಿದ್ದುದು,ಓದದಿದ್ದರೂ ಅಂಕ ಪಡೆಯುವ ಸಾಮರ್ಥ್ಯ ಪಡೆದು ಭೇಷ್ ಎನಿಸಿಕೊಂಡಿದ್ದುದು.....
ಒಂದು ಹುಡುಗಿಗೆ ಆಕೆಯ ಸ್ನೇಹಿತೆಯ ಮೂಲಕ ಪ್ರಪೋಸ್ ಮಾಡಿ ಒಪ್ಪಿಸಿ ಪ್ರೀತಿ ಮಾಡಿದ್ದು,ಪ್ರತಿದಿನ ಪ್ರೇಮಪತ್ರ ಕೊಡುತ್ತಿದ್ದುದು, ನಾನು ಇನ್ನೊಬ್ಬಳನ್ನು ಪ್ರೀತಿಸುವ ವಿಷಯ ತಿಳಿದು ಆಕೆ ಮುನಿಸಿಕೊಳ್ಳುತ್ತಿದ್ದುದು..
ಮತ್ತೆ ಮತ್ತೆ ಜಗಳ ಅಡಿ ಒಂದಾಗುತ್ತಿದ್ದುದು,ಪ್ರೇಮದ ಕಾಣಿಕೆ ನೀಡುತ್ತಿದ್ದುದು.....
ಮೊದಲ ಬಾರಿಗೆ ಸೆಕ್ಸ್ ಬುಕ್ ಓದಿದ್ದು,ಹಸ್ತಮೈಥುನ ಮಾಡಿಕೊಂಡದ್ದು,ಲೈಂಗಿಕತೆಯ ಬಗ್ಗೆ ತಲೆಕೆಡಿಸಿಕೊಂಡು ಹೆಚ್ಚು ಹಾಳಾಗಿದ್ದುದು,ಓದೋದು ಬಿಟ್ಟರೂ ಉತ್ತಮ ಅಂಕವನ್ನೇ ಪಡೆದುಕೊಂಡದ್ದು.....
ಚೆನ್ನಾಗಿ ಓದಬೇಕೆಂಬ ಹಂಬಲದಿಂದ ಕಾಲೇಜು ಸೇರಿ ಓದುತ್ತಿದ್ದುದು, ಮೊದಮೊದಲು ಅಪರಿಚಿತರ ನಡುವೆಯೇ ಸಾಗಿದ್ದುದು,ಮುಗ್ದನಾಗಿ ಶ್ರಮಪಟ್ಟು ಓದಿ ಕಾಲೇಜಿನವರಿಂದ ಶಹಬ್ಬಾಸ್ ಗಿರಿ ಪಡೆದಿದ್ದುದು,ನಾನಾಯ್ತು ನನ್ನ ಪುಸ್ತಕ ಆಯ್ತು ಎಂದು ಇದ್ದುದು,ಹಲವಾರು ಕನಸು ಕಂಡಿದ್ದುದು, ಕಾಲೇಜಿನವರು ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆ ಆಗುವ ವಿದ್ಯಾರ್ಥಿ ಪಟ್ಟಿಯಲ್ಲಿ ನಾನು ಒಬ್ಬನಾದದ್ದು.....
ಮೀಸೆ ಚಿಗುರಿದ್ದು, ಕಾಲಕ್ರಮೇಣ ಹುಡುಗರ ಸಹವಾಸ ಸೇರಿದ್ದು, ಹಳೆ ಚಾಳಿ ಮುಂದುವರೆಸಿದ್ದು,ಕಾಲೇಜಿನಲ್ಲಿ ಉಪನ್ಯಾಸಕರನ್ನು ರೇಗಿಸಿದ್ದು,ಹುಡುಗಿಯರ ಹಿಂದೆ ಅಲೆದಿದ್ದುದು, ಓದುವುದು ಕಡಿಮೆ ಮಾಡಿ ಹಾಳಾಗಿದ್ದುದು.. ಆದ್ರೂ ಉತ್ತಮ ಅಂಕವನ್ನೇ ಪಡೆದಿದ್ದುದು.....

'ರಾಹುದೆಸೆ' ಶುರು ಆದದ್ದು ..

ಮೊದಲಬಾರಿಗೆ ಬ್ಲೂ ಫಿಲಂ ನೋಡಿದ್ದು, ಮತ್ತೆ ಮತ್ತೆ ನೋಡಬೇಕೆನಿಸಿ ಕಾಲೇಜು ನಿಲ್ಲಿಸಿ ನೋಡಿದ್ದು, ಅಂತರ್ಜಾಲಕ್ಕೆ ಕಾಲಿಟ್ಟಿದ್ದುದು, ಬ್ಲಾಗ್ ಪರಿಚಯ ಆಗಿ ಬ್ಲಾಗ್ ಬರೆದುದು, ಸ್ನೇಹಿತರ ಜೊತೆಗೂಡಿ ಕಾಲೇಜಿಗೆ ಬಂಕ್ ಹಾಕಿ ಫಿಲಂ ಗೆ ಹೋಗಿದ್ದುದು, ಮನೆ ಪಾಠಗಳಲ್ಲಿ ಓದುವುದಕ್ಕಿಂತ ಹೆಚ್ಚು ಆಟ ಆಡಿದ್ದು, ಬೈಕ್ ಏರಿ ಹುಡುಗಿಯರನ್ನು ಚುಡಾಯಿಸಿ ಪೋಲೀಸರ ಕಣ್ತಪ್ಪಿಸಿ ಓಡಿದ್ದುದು, ಹಲವಾರು ಗಲಾಟೆಗಳಲ್ಲಿ ಪಾಲುಗೊಂಡದ್ದು, ಮಂಡ್ಯ ಪೋಲಿಗಳಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದು..
ಅದ್ದೂರಿ ಆಗಿದ್ದ ಜೀವನ ಹಾಳಾಗಿದ್ದು, ಓದು ಬಿಟ್ಟು ನಪಾಸು ಆಗುವೆನೆಂದು ನಂಬಿದ್ದರೂ ದೇವರ ದಯೆಯಿಂದ ಉತ್ತಮ ಅಂಕ ಪಡೆದಿದ್ದು.....
ಕಡಿಮೆ ಅಂಕ ತೆಗೆದಿದ್ದಕ್ಕೆ ಮನೆಯವರಿಂದ ,ಕಾಲೇಜಿನವರಿಂದ ಬೈಸಿಕೊಂಡದ್ದು.. ಪಶ್ಚಾತ್ತಾಪ ಪಟ್ಟಿದ್ದು,ತಪ್ಪುಗಳು ಅರಿವಾದದ್ದು.....
ಹೊಸಕನಸು ಹೊತ್ತಿ ಈಗ ತಾನೇ ಡಿಗ್ರಿ ಸೇರಿ ಹೊಸ ಜೀವನ ಪ್ರಾರಂಭಿಸಿರುವುದು.....

ಇಂತ ಹಲವಾರು ಹನಿಹನಿ ನೆನಪುಗಳು ಇನ್ನು ನನ್ನ ಕಣ್ಣೆದುರಲ್ಲೇ ಇರುವಾಗ, ಹಿರಿಯರ ಮುಂದೆ ಬಾಲಕ ಎಂದು ಇರುವಾಗ ನನಗೆ ಇದೇ ಜುಲೈ ೨೯ ಕ್ಕೆ ಆಗಲೇ ಹದಿನೆಂಟು ವರ್ಷಗಳಾದ ಸಂಭ್ರಮ.....

ಆಗಲೇ ದೊಡ್ದವನಾದೆನ ಎಂಬ ಕುತೂಹಲ, ಜವಾಬ್ದಾರಿಗಳು ಶುರುವಾಗುವುವೇನೋ ಎಂಬ ಕಾತಾಳ.....

ಹಲವಾರು ಕನಸು ಕಾಣುತ್ತ ಹದಿನೆಂಟರ ಹರೆಯದಲ್ಲಿ ಬಿಸಿನೆತ್ತರ ದೇಹವನ್ನು ಹಿಡಿತದಲ್ಲಿಟ್ಟು, ಇನ್ನು ಮುಂದೆಯಾದರೂ ಹೊಸ ಜೀವನ ಪ್ರಾರಂಭಿಸೋಣ ಎಂದುಕೊಂಡು ನವಚೈತನ್ಯದಲ್ಲಿ ನವಘಳಿಗೆಗೆ ಕಾಲಿಡುತ್ತಿರುವ ನನಗೆ ಭಗವಂತನಾದಿಯಾಗಿ ತಮ್ಮೆಲ್ಲರ ಆಶಿರ್ವಾದ ಸದಾ ಇರಲಿ.....


ಇಂತಿ,
ನಿಮ್ಮ ಆಶೀರ್ವಾದದ ನಿರೀಕ್ಷೆಯಲ್ಲಿರುವಾತ...

ನಾನಾ ....?

ನನ್ನ ಫೋಟೋ
"ಜಗತ್ತಿನ ನಾಟಕರಂಗದಲ್ಲಿ ವಿಧಿಯ ಬರವಣಿಗೆಯನ್ನು ಮೀರುವವರು ಯಾರು?" ಅಂತ ಧೃಡವಾಗಿ ನಂಬಿರುವವನು ನಾನು! ನನ್ನಿಂದ ಏನೇ ಆದರೂ ಅದು ನಾನು ಮಾಡಿದ್ದಲ್ಲ,ನನ್ನ ಹಣೆಯಲ್ಲಿ ಬರೆದಿದ್ದುದು ಎಂದು ಹೇಳುವವನು ನಾನು.ಪುಂಗಿ ನಾದಕ್ಕೆ ತಲೆದೂಗಿ ನಡೆವ ನಾಗರಹಾವಂತೆ ,ವಿಧಿ ತೋರ್ಸೋ ದಾರಿಯಲ್ಲಿ ತಲೆ ತಗ್ಗಿಸಿ ನಡೆವ... ನಾನು ಹಣೆಬರಹದ ಮುಂದೆ ಏನು ಮಾಡಕ್ಕಾಗಲ್ಲ,ಹಣೆಲಿ ಏನ್ ಬರೆದಿರೋತ್ತು ಹಾಗೆ ಆಗಲೇ ಬೇಕು ಅದನ್ನ ಬದಲಾಯಿಸಲು ಹರಿ-ಬ್ರಹ್ಮಾದಿಗಳಿಂದಲೂ ಸಾದ್ಯವಿಲ್ಲ ಎಂಬುದು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಮನಸ್ಸು ಮಾಡಿದ್ರೆ ಏನು ಮಾಡಕ್ಕಾಗಲ್ಲ ,ಹಣೆಯಲ್ಲಿ ಬರೆದಿರಬೇಕು ಅನ್ನುವಷ್ಟರ ಮಟ್ಟಿಗೆ ನಾನು ತಲುಪಿದ್ದೇನೆ. ಯಾಕೆಂದರೆ.. ವಿಧಿಗೆ ಸವಾಲ್ ಹಾಕಿ ಕಂಡಿದ್ದು ಬರೀ ಸೋಲಿನ ಸಾಲು........ ನನ್ನೊಂದಿಗೆ:hanebaraha@gmail.com