ಈ ಬ್ಲಾಗಿನಲ್ಲಿ ಪ್ರೇಮ,ಕಾಮ,ಅಸಹ್ಯ,ಚಿಂತಕ,ನೋವು,ನಲಿವು,...ಎಲ್ಲವನ್ನು ಒಳಗೊಂಡ ಕಣ್ಣೀರು ಹರಿದಾಡುತ್ತದೆ..

ಮಂಗಳವಾರ, ಸೆಪ್ಟೆಂಬರ್ 8, 2009

ಒಂದು ಕನಸಿನ ಸುತ್ತಾ...

ನನ್ನೆಲ್ಲ ಕನ್ನಡಭಿಮಾನಿ ದೇವರುಗಳಿಗೆ ನಮಸ್ತೆ...

ಹೇಳಬೇಕೆಂದರೆ ನಾನು ಪಕ್ಕಾ ಹಳ್ಳಿ ಹುಡ್ಗ ಕಣ್ರೀ...ಈ ಇಂಟರ್ನೆಟ್,ಬ್ಲಾಗ್ ಇವೆಲ್ಲ ಏನು ಗೊತ್ತಿಲ್ದೆ ಇರೋ ಹುಡ್ಗ ನಾನಾಗಬೇಕಿತ್ತು.. ಎಸ್.ಎಸ್.ಎಲ್.ಸಿ. ಪಾಸ್ ಆದ ಮೇಲೆ ನಾನು, ನಮ್ಮೂರ ಹುಡ್ಗರು,ಬಸ್ಸು,ಕಾಲೇಜು,ಹೊಲ,ಮನೆ... ಇಷ್ಟರಲ್ಲೇ ಎಲ್ಲ ಜೀವನ ಮುಗಿದುಹೋಗುತ್ತೆ ಅಂದುಕೊಂಡಿದ್ದೆ. ಆದರೆ ವಿಧಿಲಿಖಿತನೆ ಬೇರೆ ಇತ್ತು..

ಅನಿರೀಕ್ಷಿತವಾಗಿ ನಮ್ಮ ಕುಟುಂಬ ಸಮೇತ ಎಲ್ಲರೂ ಹುಟ್ಟೂರನ್ನು ಬಿಟ್ಟು ಸಿಟಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸ ಇದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಬೇಕಾದ ಪರಿಸ್ಥಿತಿ ಬಂತು... ಇದೇ ನಿಟ್ಟಿನಲ್ಲಿ ಇರಬೇಕಾದ್ರೆ ಅಲ್ಲಿನ ವಾತಾವರಣಕ್ಕೆ ಹೊಂದುಕೊಂಡಂತೆ ನನಗೆ ಇಂಟರ್ನೆಟ್-ಆರ್ಕುಟ್ ಪರಿಚಯ ಆಯ್ತು.. ಆಗ ಇದುವರೆಗೂ ಅಪರಿಚಿತರಾಗೆ ಇದ್ದ ಒಬ್ಬ ವ್ಯಕ್ತಿ ಆರ್ಕುಟ್ ಮೂಲಕ ಮೊದಲ ಬಾರಿಗೆ ಪರಿಚಿತರಾದರು.. ಅವರು ಒಬ್ಬ ಭಾವುಕ ಜೀವಿ ....

ನನಗೆ ಬೇಸರವಾಗಿ ನಾನು ಆರ್ಕುಟ್ ಡಿಲೀಟ್ ಮಾಡಿದಾಗ ಅವ್ರೆ ಫೋನ್ ಮಾಡಿ ಹೀಗೆಲ್ಲ ಬೇಸರ ಮಾಡಿಕೊಳ್ಳಬಾರದು ಎಂದು ಧೈರ್ಯ ತುಂಬಿ ಮತ್ತೆ ಹೊಸ ಆರ್ಕುಟ್ ಮಾಡಿಸಿದರು.. ಅಂದಿನಿಂದ ಇಬ್ರು ತುಂಬಾನೇ ಹತ್ತಿರವಾಗುತ್ತ ಹೋದ್ವಿ.. ನಾನು ಯಾರ ಹತ್ತಿರನೂ ಹೇಳಿಕೊಳ್ಳಲಾಗದ ಕೆಲವು ವಿಷಯಗಳನ್ನು ಅವರ ಹತ್ತಿರ ಹೇಳಿಕೊಂಡು.. ಅವರ ಮನಸ್ಸಿಗೆ ಹತ್ತಿರವಾಗುತ್ತ ಹೋದಂತೆ ಅವರ ಮನಸ್ಸಿನ ಬಿರುಕುಗಳನ್ನೂ ನನಗೆ ತೋರಿಸಿದರು.. ಅವರ ಹುಟ್ಟುಹಬ್ಬದ ದಿನ ನನಗೆ ಒಂದು ಕಾಣಿಕೆ ಕೊಡುತ್ತೇನೆಂದು ಹೇಳಿ ಅವರ ಬ್ಲಾಗ್ ವಿಳಾಸ ಕೊಟ್ಟರು.. ಅಲ್ಲಿವರೆಗೂ ನನಗೆ ಬ್ಲಾಗ್ ಬಗ್ಗೆ ಗೊತ್ತೇ ಇರಲಿಲ್ಲ... ಅವ್ರು ಬ್ಲಾಗ್ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟು ನನ್ನನ್ನೂ ಬ್ಲಾಗ್ ಮಾಡುವಂತೆ ಪ್ರೇರೇಪಿಸಿದರು.. ನಂಗೆ ಆ ವಿಷಯ ಮೊದಮೊದಲು ನಾನು ಬರೆಯುತ್ತೇನ,ನಂಗೆ ಬರವಣಿಗೆ ಕೌಶಲ್ಯ ಇದೆಯಾ? ಎಂದು ಹಾಸ್ಯ ಅನಿಸಿದರೂ ಮತ್ತೆ ಮತ್ತೆ ಅವ್ರ ಮಾತಿನಿಂದ ಉತ್ತೇಜಿತನಾಗಿ ಬ್ಲಾಗ್ ಮಾಡೋಣ ಅಂದುಕೊಂಡೆ.. ಸ್ವಲ್ಪ ದಿನಗಳ ನಂತರ ಅವರ ಬ್ಲಾಗ್ ಕನ್ನಡಪ್ರಭದ ಬ್ಲಾಗಾಯಣದಲ್ಲಿ ಬಂದಿದ್ದು ನಂಗೆ ಇನ್ನಷ್ಟು ಹುಮ್ಮಸ್ಸು ಸಿಗುವಂತಾಯ್ತು ..

ಹೀಗಿರುವಾಗ ಒಮ್ಮೆ ಮಂಡ್ಯದಲ್ಲಿ ನಮ್ಮಿಬ್ಬರ ಭೇಟಿ ಕೂಡ ಆಯ್ತು,ಆಗ ಅವರು ನನಗೆ ಒಂದು ಲೇಖನಿಯನ್ನು ಕಾಣಿಕೆಯಾಗಿ ಕೊಟ್ಟಿದ್ದರು (ಅದು ಲೇಖನಿಯೆಂದು ಗೊತ್ತಾಗಿದ್ದು ಮನೆಗೆ ಹೋಗಿ ಪ್ಯಾಕ್ ತೆರೆದು ನೋಡಿದಾಗಲೇ..!). ಅಂದು ನನಗೆ ಅವರು ಆದಷ್ಟು ಬೇಗ ಒಂದು ಬ್ಲಾಗ್ ಮಾಡು ಒಳ್ಳೆ ಹೆಸರು ಇರುತ್ತೆ ಎಂದು ಹೇಳಿದರು.. ಆಗ ನಾನು ಕೂಡ ಹೇಳಿದೆ: ಮಾಡೇ ಮಾಡುತ್ತೇನೆ ಮುಂದೊಂದು ದಿನ ನಿಮ್ಮ ಬ್ಲಾಗ್ ನಂತೆ ಬ್ಲಾಗಾಯಣದಲ್ಲಿ ಬರೋ ರೀತಿ ಬರೆಯುತ್ತೇನೆ.. ಎಂದು ಹೇಳಿ ಅವತ್ತಿನಿಂದಲೇ "ಮುಂದೆ ಬ್ಲಾಗ್ ಎಂಬ ಕೀರ್ತಿ- ಹಿಂದೆ ಗುರುವಾಗಿ ಆ ದಿವ್ಯಮೂರ್ತಿ " ಎಂದುಕೊಂಡು ಅವರು ಕೊಟ್ಟ ಲೇಖನಿಯ ಮೇಲೆಯೇ ಮೊಟ್ಟಮೊದಲ ಕವನ "ಬರೆಯಲಾರೆನು ಗುರುವೇ ನೀ ಕೊಟ್ಟ ಲೇಖನಿಯಲ್ಲಿ' ಬರೆದೆ..

[ನಾನು ಅಂದು ಹೇಳಿದಂತೆ ಇಂದು ಬ್ಲಾಗ್ ಕೂಡ ಮಾಡಿದ್ದೇನೆ..ಆದರೆ ನಾನು ಬಹಳ ಕಷ್ಟಪಟ್ಟು ಬರೆದ ಕೆಲವು ಕವನಗಳಿಗೆ ಯಾರ ಅಭಿಪ್ರಾಯವೂ ಬರದೆ ಬೇಸರವಾಗಿ ನನ್ನ ಬ್ಲಾಗಿಗೆ ಜನಪ್ರಿಯ ಆಗೋಲ್ಲ ಎಂದುಕೊಂಡು ಬ್ಲಾಗ್ ಅನ್ನು ಡಿಲೀಟ್ ಮಾಡಿ ಬೇರೇ ತೆರೆಯೋಣ ಅನ್ನಿಸಿತ್ತು..]

ಅದರೆ ಜುಲೈ ೧ ೨೦೦೯ ರಂದು ನನ್ನ ಬ್ಲಾಗ್ ಕನ್ನಡಪ್ರಭದ ಬ್ಲಾಗಾಯಣದಲ್ಲೂ ಬಂದಿದೆ.. ನಂಗೆ ತುಂಬಾ ಖುಷಿ ಆಗುತ್ತಿದೆ,ಯಾವುದೋ ಒಂದು ಕನಸು ನೆನಸಾದಂತೆ ಕಾಣುತ್ತಿದೆ.ಈಗ ನನ್ನ ಮನಸು ಬದಲಾಗಿದೆ,ಇನ್ನು ನಾನು ಈ ಬ್ಲಾಗ್ ಅನ್ನು ತೆಗೆಯಬಾರದು ಎಂದುಕೊಂಡಿದ್ದೇನೆ...

ನನ್ನ ಬ್ಲಾಗ್ ಬ್ಲಾಗಾಯಣದಲ್ಲಿ ಬಂದಿರುವ ವಿಷಯವನ್ನು ನನಗೆ ತಿಳಿಸಿದವರು ನನಗೆ ಬ್ಲಾಗ್ ಬಗ್ಗೆ ತಿಳಿಸಿಕೊಟ್ಟ ಅದೇ ಆಪ್ತರು.. ಅವರಿಗೆ ನನ್ನ ತುಂಬುಹೃದಯದ ಧನ್ಯವಾದಗಳು..ಜೊತೆಗೆ ನನ್ನಿಷ್ಟ ಬಂದಂತೆ ಗೀಚಿದ್ದ ನನ್ನ ಬ್ಲಾಗನ್ನು ಗುರುತಿಸಿ ಪ್ರಕಟಿಸಿದ ಕನ್ನಡಪ್ರಭದ ಸಂಪಾದಕವರ್ಗದವರಿಗೂ ಹೃತ್ಪೂರ್ವಕ ವಂದಿಸುತ್ತೇನೆ..ನನಗೆ ಬ್ಲಾಗ್ ಎಂಬುದರ ಬಗ್ಗೆ ಅರಿವು ಮೂಡಿಸಿ ನನ್ನಲ್ಲಿನ ಬರವಣಿಗೆ ಕೌಶಲ್ಯವನ್ನು ಹೊರತಂದ ನನ್ನ ಆಪ್ತರಿಗೆ ಮತ್ತೊಮ್ಮೆ ಹೃತ್ಪೂರ್ವಕ ವಂದಿಸುತ್ತೇನೆ.....

ನಾನಾ ....?

ನನ್ನ ಫೋಟೋ
"ಜಗತ್ತಿನ ನಾಟಕರಂಗದಲ್ಲಿ ವಿಧಿಯ ಬರವಣಿಗೆಯನ್ನು ಮೀರುವವರು ಯಾರು?" ಅಂತ ಧೃಡವಾಗಿ ನಂಬಿರುವವನು ನಾನು! ನನ್ನಿಂದ ಏನೇ ಆದರೂ ಅದು ನಾನು ಮಾಡಿದ್ದಲ್ಲ,ನನ್ನ ಹಣೆಯಲ್ಲಿ ಬರೆದಿದ್ದುದು ಎಂದು ಹೇಳುವವನು ನಾನು.ಪುಂಗಿ ನಾದಕ್ಕೆ ತಲೆದೂಗಿ ನಡೆವ ನಾಗರಹಾವಂತೆ ,ವಿಧಿ ತೋರ್ಸೋ ದಾರಿಯಲ್ಲಿ ತಲೆ ತಗ್ಗಿಸಿ ನಡೆವ... ನಾನು ಹಣೆಬರಹದ ಮುಂದೆ ಏನು ಮಾಡಕ್ಕಾಗಲ್ಲ,ಹಣೆಲಿ ಏನ್ ಬರೆದಿರೋತ್ತು ಹಾಗೆ ಆಗಲೇ ಬೇಕು ಅದನ್ನ ಬದಲಾಯಿಸಲು ಹರಿ-ಬ್ರಹ್ಮಾದಿಗಳಿಂದಲೂ ಸಾದ್ಯವಿಲ್ಲ ಎಂಬುದು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಮನಸ್ಸು ಮಾಡಿದ್ರೆ ಏನು ಮಾಡಕ್ಕಾಗಲ್ಲ ,ಹಣೆಯಲ್ಲಿ ಬರೆದಿರಬೇಕು ಅನ್ನುವಷ್ಟರ ಮಟ್ಟಿಗೆ ನಾನು ತಲುಪಿದ್ದೇನೆ. ಯಾಕೆಂದರೆ.. ವಿಧಿಗೆ ಸವಾಲ್ ಹಾಕಿ ಕಂಡಿದ್ದು ಬರೀ ಸೋಲಿನ ಸಾಲು........ ನನ್ನೊಂದಿಗೆ:hanebaraha@gmail.com