ಈ ಬ್ಲಾಗಿನಲ್ಲಿ ಪ್ರೇಮ,ಕಾಮ,ಅಸಹ್ಯ,ಚಿಂತಕ,ನೋವು,ನಲಿವು,...ಎಲ್ಲವನ್ನು ಒಳಗೊಂಡ ಕಣ್ಣೀರು ಹರಿದಾಡುತ್ತದೆ..

ಬುಧವಾರ, ಏಪ್ರಿಲ್ 1, 2009

ವಿಧಿಸ್ವತ್ತಿನ ಮುನ್ನುಡಿ ಬರಹ

ನನ್ನ ಕಥೆ ಕೇಳಿದರೆ ಕಿವಿಯಲ್ಲಿ ರಕ್ತ ಬರಬಹುದು,ನನ್ನ ಕಥೆ ಓದಿದರೆ ಕಣ್ಣಲ್ಲಿ ರಕ್ತ ಬರಬಹುದು ಅಂತ ದುರಂತಕಥಾನಾಯಕ ನಾನು.

ಅದಕ್ಕಾಗಿ ಕೇವಲ ಮುನ್ನುಡಿಯನ್ನು ಮಾತ್ರ ನಿಮ್ಮ ಮುಂದಿಡುತ್ತಿರುವ ನೇರ-ನಿಷ್ಠುರ ನುಡಿಯ ಬಲಿಪಶು!
ವಿಧಿಸ್ವತ್ತಿನ ಮುನ್ನುಡಿ ಬರಹ:ನಾನು ಕೂಡ ಎಲ್ಲರಂತೆಯೇ ಏನೂ ಅರಿಯದ ಮುಗ್ದ ಮಗುವಿನಂತೆ ಈ ಭೂಮಿಗೆ ಬಂದೆ.ಬೆಳೆದಂತೆ ಆ ದೇವರು ಎಲ್ಲರಿಗೂ ನೀಡೋ ಹಾಗೆ ನನಗೂ ಅರಿಷಡ್ವರ್ಗಗಳಾದ ಕಾಮ,ಕ್ರೋಧ,ಮದ,ಮತ್ಸರ,ಮೋಹ ಮತ್ತು ಲೋಭ ಎಂಬ ಆರು ಹುಚ್ಚು ಕುದುರೆಗಳನ್ನು ಕಟ್ಟಿದ ಮನಸ್ಸು ಎಂಬ ರಥವನ್ನು ನೀಡಿದ.ಆದರೆ ಎಲ್ಲರಿಗೂ ಆ ರಥಕ್ಕೆ ಲಗಾಮು ನೀಡೋ ಹಾಗೆ ನನ್ನ ರಥಕ್ಕೆ ಲಗಾಮು ನೀಡುವುದನ್ನು ಆ ದೇವರು ಬಹುಶಃ ಮರೆತ ಅಂತ ಕಾಣುತ್ತೆ.ಜೊತೆಗೆ ವಿದ್ಯೆ ಮತ್ತು ಹಣವನ್ನು ನೀಡಿದ್ದ.! ಇವೆಲ್ಲ ಇರುವವನು ಹೇಗಿರಬಹುದು ಎಂದು ನೀವೇ ಊಹಿಸಿ.

ಒಂದು ಸುಂದರ ಓದೋ ಹುಡುಗಿ ನನ್ನ ಕಣ್ಣಿಗೆ ಬಿದ್ದಾಗ ನನ್ನ ವಿದ್ಯೆ ಅವಳಿಗಿಂತ ಮುಂದಿರಬೇಕು ಅಂತ ಹೇಳಿದರೆ ನನ್ನಲ್ಲಿ ಇದ್ದ ಅರಿಷಡ್ವರ್ಗಗಳು ಅವಳ ಮೋಹಕ ಚೆಲುವಿನ ಬಯಕೆಗೆ ಕಿಚ್ಚಿಡುತ್ತಿದ್ದವು, ಒಂದರ್ಥದಲ್ಲಿ ನಾನು "ಕಾಮತುರಾಣಾನಾಂ ಭಯಾನಂ ಲಜ್ಜಾಂ !" ಎಂಬಂತೆ ಆಗಿದ್ದೆ ಅನಿಸುತ್ತೆ.ಆದರೂ ಆ ದೇವರು ನನಗೆ ನೀಡಿದ್ದ ಕೆಲವು ಒಳ್ಳೆ ಅಂಶಗಳು ನನ್ನನ್ನ ಒಂದು ಮಟ್ಟಕ್ಕೆ ತಂದು ನಿಲ್ಲಿಸಿದ್ದವು.

ಇವೆಲ್ಲ ನಡೆದುದ್ದು ಒಂದು ಸುಂದರ ಹಳ್ಳಿಯ ಪರಿಸರದಲ್ಲಿ.!
ಉನ್ನತ ವಿದ್ಯಾಭ್ಯಾಸಕ್ಕೆಂದು ಕನಸುಗಳ ಜೊತೆಗೆ ಪಟ್ಟಣಕ್ಕೆ ಬಂದೆ.ಆದರೆ ಮೊದಲೇ ಕೆಟ್ಟ ವಿಧಿಯಾಟಕ್ಕೆ ಸಿಕ್ಕಿ ಸಿಲುಕುತ್ತಿದ್ದ ನನ್ನ ಪಾಪಿ ಹಣೆಬರಹಕ್ಕೆ ವಿದ್ಯಾರ್ಥಿ ದೆಸೆಯಲ್ಲೇ ರಾಹುದೆಸೆ ಅಡ್ಡಗಾಲು ಹಾಕಿ ನಿಂತಿತ್ತು,ಜೊತೆಗೆ ಪ್ರೀತಿಯ ಖಜಾನೆ ಹೊತ್ತು ಬಂದಿದ್ದ ನನಗೆ ಇಲ್ಲಿ ಸಿಕ್ಕಿದವರು ವಿಶ್ವಾಸಗಾತುಕ ಮಿತ್ರರು ಅವರು ಬಂದು ಪ್ರೀತಿಯನ್ನು ಹಂಚಿಕೊಳ್ಳದೆ ಅದನ್ನು ಖಾಲಿ ಮಾಡಿ ಮನಸ್ಸನ್ನು ಬರಿದು ಮಾಡಿ ಕೈ ಚೆಲ್ಲಿ ಹೊರಟರು.

ನಾನು ಇದಕ್ಕೆಲ್ಲ ಹಣೆಬರಹನೆ ಕಾರಣ ಎಂದುಕೊಂಡಿದ್ದೇನೆ!
ಆದರೂ ಕೊನೆಗಳಿಗೆಯಲ್ಲಿ ಕೈ ಹಿಡಿದ ದೇವರು ನನ್ನ ಕಣ್ಣೀರ ಕಡಲಲ್ಲಿ ಬರೆದಿದ್ದ ನನ್ನ ಕನಸಿನ ಚಿತ್ತಾರವನ್ನು ಅಲೆಗಳು ಬಂದು ಅಪ್ಪಳಿಸಿ ಅಳಿಸುವ ಮುನ್ನ ಹೃದಯ ಸಮುದ್ರದಲ್ಲಿ ಕಣ್ಣೀರನ್ನೇ ಬರಿದು ಮಾಡುವುದರ ಮೂಲಕ ಹಾಗೆಯೇ ಹಸಿರಾಗಿಸಿದ್ದಾನೆ.!

.....ಆದರೂ ಕೆಲವು ನೆನಪುಗಳು ಬೆಂಬಿಡದೆ ಕಾಡುತ್ತಲೇ ಇವೆ.
_____________________________________

10 ಕಾಮೆಂಟ್‌ಗಳು:

  1. ಹೃದಯ ಸಮುದ್ರದಲ್ಲಿ ಕಣ್ಣೀರನ್ನೇ ಬರಿದು ಮಾಡುವುದರ ಮೂಲಕ ಹಾಗೆಯೇ ಹಸಿರಾಗಿಸಿದ್ದಾನೆ.!
    neare ellada meale hasiru heagirurhe....
    kelavu prasnegalige ottara sigodilla....
    kelavu prasnegalige ottara sigodilla....

    ಪ್ರತ್ಯುತ್ತರಅಳಿಸಿ
  2. ಸಂದೇಶ್ ಅವ್ರೆ...
    ಖಂಡಿತ ಬರೆಯಲು ಪ್ರಯತ್ನಿಸುತ್ತೇನೆ.ನಿಮ್ಮಂತವರು ನಮಗೆ ಸ್ಪೂರ್ತಿಯಾಗಬೇಕು..

    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಮಂಜುನಾಥರವರೆ...

    "ಹೃದಯ ಸಮುದ್ರದಲ್ಲಿ ಕಣ್ಣೀರನ್ನೇ ಬರಿದು ಮಾಡುವುದರ ಮೂಲಕ ಹಾಗೆಯೇ ಹಸಿರಾಗಿಸಿದ್ದಾನೆ.!"
    ಅಂದರೆ ಮೊದಲು ಮನಸ್ಸು ಮೃದುವಾಗಿತ್ತು,ಆದ ಕೆಡಕುಗಳ ಬಗ್ಗೆ ಯೋಚಿಸಿ ಅವುಗಳ ಬಗ್ಗೆಯೇ ಚಿಂತಿಸಿ ,ದುಃಖ ಒತ್ತರಿಸಿ ಕಣ್ಣೀರು ಬರುತ್ತಿತ್ತು. ಬೇರೆ ಯಾವುದರ ಬಗ್ಗೆ ಚಿಂತಿಸಲು ಆಗುತ್ತಿರಲಿಲ್ಲ,ಪಯಣ ಅಲ್ಲಿಗೆ ನಿಂತಿತ್ತು. ಹೃದಯ ಸಮುದ್ರದಲ್ಲಿ ಕಣ್ಣೀರು ಬರಿದಾದುದರಿಂದ ಮನಸ್ಸು ಕಲ್ಲಾಗಿ ಯಾವುದಕ್ಕೋ ತಲೆ ಕೆಡಿಸಿಕೊಳ್ಳದೆ ಆಗಿದ್ದು ಆಗಲಿ ಎಲ್ಲ ಹಣೆಬರಹ ಅಂದುಕೊಂಡು ಪಯಣ ಮುಂದುವರಿದಿದೆ.

    "ಹಸಿರಾಗಿದೆ" ಎಂದರೆ ಇನ್ನು ಉಳಿದಿದೆ ಎಂದು ಇಲ್ಲಿನ ಅರ್ಥ.
    ನಿಮ್ಮ ಪ್ರಕಾರ ಹೇಳಿದರೆ 'ಆತ ಕಂಬಿ ಕಿತ್ತ ,(ಕಾಲು ಕಿತ್ತ) ' ಎಂಬುದರ ಅರ್ಥ ಸರಿಹೋಗುವುದಿಲ್ಲ.

    ಕೆಲವಕ್ಕೆ ಏನು .,ಯಾವುದಕ್ಕೂ ಉತ್ತರವೇ ಇಲ್ಲ.,ನಿಮ್ಮ ಪ್ರಶ್ನೆ ಏನೆಂದು ಹೇಳಿದರೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತೇವೆ.

    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  4. "ನಿಮ್ಮ ಕನಸುಗಳ ಅಲೆಗಳಲ್ಲಿ ಕಣ್ಣಿರಿನ ಸಾಲುಗಳಲ್ಲಿ.. ದುಃಖದ ನೆನಪಿನಲ್ಲಿ ಸಾಗುತಿರುವ ಹೃದಯಕೆ ಎಂದಿಗೂ ನಗುವಿನ ಗಾಳಿಯನ್ನೇ ಉಡುಗೊರೆಯಾಗಿ ಕೊಡುತ್ತೇನೆ .. ನಿಮ್ಮ ನೋವುಗಳಿಗೆ ಎಂದಿಗೂ ಸಂತೋಷವನ್ನೇ ಸೂಚಿಸುವ ನಿಮ್ಮ ಗೆಳತಿ ಶೃತಿ ಇರುತ್ತಾಳೆ ಮರೆಯಬೇಡಿ ಗೆಳೆಯ "

    ಪ್ರತ್ಯುತ್ತರಅಳಿಸಿ
  5. ಶ್ರುತಿ ಅವರಿಗೆ ..
    ನಮಸ್ತೆ .

    ನಿಮ್ಮ ಸ್ನೇಹಕ್ಕೆ ನಾನು ಚಿರಋಣಿ,ನಿಮ್ಮ ಪ್ರೀತಿ ಪ್ರೋತ್ಸಾಹ ಈ ಬಲಿಪಶುವಿನ ಸದಾ ಹೀಗೆ ಇರಲಿ.

    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  6. illi thumba shnehithru halvaru rithi avrade adha abhipraya , shneha anisike ella eliddare, adaralli nanna e putta sandesha nimage
    nimma jeevanadha yavudhe kashta sukhagalige nimma jothe hanchikollalu e nimma shnehitha preethu nimmodige sadha eruthane chinthisabedi

    nanu nimmodiger eddene nimma athimya geleyanaagi,,



    aha devaru olledhu madali ,,

    ಪ್ರತ್ಯುತ್ತರಅಳಿಸಿ
  7. chala ಅವರಿಗೆ ನಮಸ್ತೆ.

    ನೀವು ಈ ಬಲಿಪಶುವಿನ ಮೇಲೆ ಇಟ್ಟಿರುವ ಅನುಕಂಪ ಹೀಗೆ ಇರಲಿ.
    ನಮ್ಮ ಸ್ನೇಹ ಅಮರವಾಗಿರಲಿ.


    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  8. ಶಿವಶಂಕರ ವಿಷ್ಣು ಯಳವತ್ತಿ ಅವರಿಗೆ ನಮಸ್ತೆ..

    ನೀವು ನೀಡೋ ಪ್ರೋತ್ಸಾಹಕ್ಕೆ ಧನ್ಯವಾದಗಳು.
    ನಾನು ಕೂಡ ನಿಮ್ಮನ್ನು ಹತ್ತಿರವೇ ಇದ್ದೀರೆಂದು ಭಾವಿಸಿ,ಇಲ್ಲಿಂದಲೇ ನಿಮ್ಮ ಆಶೀರ್ವಾದ ಬಯಸುತ್ತ ಬರೆಯಲು ಮುಂದುವರಿಸುತ್ತೇನೆ.

    ವಂದನೆಗಳು.

    ಪ್ರತ್ಯುತ್ತರಅಳಿಸಿ

ನಾನಾ ....?

ನನ್ನ ಫೋಟೋ
"ಜಗತ್ತಿನ ನಾಟಕರಂಗದಲ್ಲಿ ವಿಧಿಯ ಬರವಣಿಗೆಯನ್ನು ಮೀರುವವರು ಯಾರು?" ಅಂತ ಧೃಡವಾಗಿ ನಂಬಿರುವವನು ನಾನು! ನನ್ನಿಂದ ಏನೇ ಆದರೂ ಅದು ನಾನು ಮಾಡಿದ್ದಲ್ಲ,ನನ್ನ ಹಣೆಯಲ್ಲಿ ಬರೆದಿದ್ದುದು ಎಂದು ಹೇಳುವವನು ನಾನು.ಪುಂಗಿ ನಾದಕ್ಕೆ ತಲೆದೂಗಿ ನಡೆವ ನಾಗರಹಾವಂತೆ ,ವಿಧಿ ತೋರ್ಸೋ ದಾರಿಯಲ್ಲಿ ತಲೆ ತಗ್ಗಿಸಿ ನಡೆವ... ನಾನು ಹಣೆಬರಹದ ಮುಂದೆ ಏನು ಮಾಡಕ್ಕಾಗಲ್ಲ,ಹಣೆಲಿ ಏನ್ ಬರೆದಿರೋತ್ತು ಹಾಗೆ ಆಗಲೇ ಬೇಕು ಅದನ್ನ ಬದಲಾಯಿಸಲು ಹರಿ-ಬ್ರಹ್ಮಾದಿಗಳಿಂದಲೂ ಸಾದ್ಯವಿಲ್ಲ ಎಂಬುದು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಮನಸ್ಸು ಮಾಡಿದ್ರೆ ಏನು ಮಾಡಕ್ಕಾಗಲ್ಲ ,ಹಣೆಯಲ್ಲಿ ಬರೆದಿರಬೇಕು ಅನ್ನುವಷ್ಟರ ಮಟ್ಟಿಗೆ ನಾನು ತಲುಪಿದ್ದೇನೆ. ಯಾಕೆಂದರೆ.. ವಿಧಿಗೆ ಸವಾಲ್ ಹಾಕಿ ಕಂಡಿದ್ದು ಬರೀ ಸೋಲಿನ ಸಾಲು........ ನನ್ನೊಂದಿಗೆ:hanebaraha@gmail.com