ಈ ಬ್ಲಾಗಿನಲ್ಲಿ ಪ್ರೇಮ,ಕಾಮ,ಅಸಹ್ಯ,ಚಿಂತಕ,ನೋವು,ನಲಿವು,...ಎಲ್ಲವನ್ನು ಒಳಗೊಂಡ ಕಣ್ಣೀರು ಹರಿದಾಡುತ್ತದೆ..

ಶನಿವಾರ, ಡಿಸೆಂಬರ್ 5, 2009

ಮೊದಲೇ ಹೇಳಿದಂತೆ ನನಗೆ ಈಗ 'ಸಮಯವೇ ಸರಿಯಿಲ್ಲ' ಎನ್ನುವ ಬಲಿಪಶು ನಾನು..! ನಂಗೆ ಈಗ ರಾಹುದೆಸೆ..
ಈ ರಾಹುದೆಸೆಯಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಹಾಳಾಗುತ್ತೆ ಎಂದು ನನಗೆ ತಿಳಿದಿತ್ತು,ಆದರೆ ಕೆಲವು ಮಾತ್ರ ಸುಸೂತ್ರವಾಗಿ ನೆರವೇರುತ್ತಲಿದ್ದವು.. ಆಗ ಒತ್ತಾಯದ ಮೇರೆಗೆ ನಾನು ನನ್ನ ಈ ಬ್ಲಾಗನ್ನು ಸೃಷ್ಟಿಸಬೇಕಾಯಿತು.. ಮುಂದೆ ನನ್ನ ಬ್ಲಾಗು ಯಾರ ಗಮನಕ್ಕೂ ಬಾರದೆ, ನಾನು ಪ್ರೀತಿಯಿಂದ ಬರೆಯುತ್ತಿದ್ದ ಲೇಖನಗಳನ್ನುಯಾರೂ ನೋಡದೆ ನನಗೆ ಬೇಸರವಾಗಿ ಒಂದು ಋತುವಿನ ಹಿಂದೆ ಈ ಬ್ಲಾಗನ್ನು ತೆಗೆದುಹಾಕಿ ನನಗೆ ಒಳ್ಳೆ ಸಮಯ ಬಂದಾಗ ಮತ್ತೆ ಸೃಷ್ಟಿಸುವ ಆಶಯ ವ್ಯಕ್ತಪಡಿಸಿದೆ.. ಆದರೆ ಅದೇ ಸಮಯಕ್ಕೆ, ಇನ್ನೂ ಎರಡೇ ಲೇಖನಗಳನ್ನು ಒಳಗೊಂಡಿದ್ದ, ನನ್ನ ಬ್ಲಾಗ್ "ಕನ್ನಡಪ್ರಭದ ಬ್ಲಾಗಾಯಣ"ದಲ್ಲಿ ಪ್ರಕಟವಾಯಿತು.. ಇದರಿಂದಾಗಿ ಒಲ್ಲದ ಮನಸ್ಸಿನಿಂದಲೇ ಕಣ್ಣೀರಿನ ಹೊಳೆಯ ನಡುವಲಿ ಕೈ ಬಿಟ್ಟಿದ್ದ ನನ್ನ ಬ್ಲಾಗನ್ನು ಮತ್ತೆ ಕೈಹಿಡಿಯಬೇಕಾಯಿತು..

ವಿಧಿಯಿಂದ ಮತ್ತೆ ಮತ್ತೆ ಎಷ್ಟೇ ಹೊಡೆತ ತಿಂದರೂ ಮೊಂಡ ಧೈರ್ಯ ಮಾಡಿ ಮೇಲೇಳುತ್ತಿದ್ದ ನನಗೆ ಇತ್ತೀಚಿಗೆ ವಿಧಿ ಭಾರಿ ಹೊಡೆತ ನೀಡಿದೆ,ನನ್ನ ಭವಿಷ್ಯದ ಮೇಲೆ ಅಗಾಧ ಪರಿಣಾಮ ಬೀರಿದ ಈ ಪೆಟ್ಟಿನಿಂದ ಒಂದು ಮಾಸದಿಂದ ನನ್ನೆದೆಯ ಗರ್ಭದಲ್ಲಿ ಚಿಗುರುತ್ತಿದ್ದ ಕನಸಿನ ಮನೆ ನಲುಗಿ ಚೂರಾಗಿದೆ...ಇದರಿಂದಾಗಿ ನನ್ನ ಮನಸ್ಸು ಹುಚ್ಚು ಹಿಡಿದಂತಾಗಿ ಅಲೆದಾಡತೊಡಗಿದೆ.. ದುಡುಕಿ ತಪ್ಪೋ ಸರಿಯೋ ಯೋಚಿಸದೆ ಕೆಲ ನಿರ್ಧಾರಗಳನ್ನು ಮಾಡುತ್ತಿದೆ...ಅಂತಹ ನಿರ್ಧಾರಗಳಲ್ಲಿ ನನ್ನ ಈ ಬ್ಲಾಗನ್ನು ಮತ್ತೆ ಕಣ್ಣೀರಿನ ಹೊಳೆಯಲ್ಲಿ ಮುಳುಗಿಸಿ ಇನ್ನೂ ಕೆಲವೇ ದಿನಗಳಲ್ಲಿ ಒಳ್ಳೆಯ ಸಮಯ ನೋಡಿ ಮತ್ತೆ ಹೊಸದಾಗಿ ಆರಂಭಿಸುವುದು ಒಂದಾಗಿದೆ..

ವಿಧಿ ನನ್ನ ಬ್ಲಾಗನ್ನು ಕಿತ್ತುಕೊಳ್ಳುತಿದೆಯೇ ಹೊರತು ನನ್ನ ಸೃಜನಾಶೀಲ ಶಕ್ತಿಯನ್ನಲ್ಲ, ನನಗೆ ಬರೆಯಲು ಮನಸ್ಸಿಲ್ಲದೆ ನಾನು ಬ್ಲಾಗಿನಿಂದ ದೂರವಾಗುತ್ತಿಲ್ಲ...

ಸ್ವಲ್ಪ ದಿನಗಳ ನಂತರ ನಿಮ್ಮ ಮುಂದೆ ಇಡುವ ನನ್ನ ಹೂವಿನಂತ ಬ್ಲಾಗನ್ನು ಕಾಪಾಡುವುದು ನಿಮ್ಮ ಕೈಯಲ್ಲೇ ಇದೆ..

ದಯವಿಟ್ಟು ನನ್ನೀ ನಿರ್ಧಾರವನ್ನು ಬದಲಾಯಿಸಲು ಯಾರೂ ಒತ್ತಾಯಿಸಬೇಡಿ..

--ಇಂತಿ:
ನಿಮ್ಮ ಜೊತೆಯ ಸ್ವಲ್ಪ ದಿನಗಳ ಬ್ಲಾಗಿಗ-
-ಎ.ಕಾ ಗುರುಪ್ರಸಾದಗೌಡ.;hanebaraha@gmail.com

1 ಕಾಮೆಂಟ್‌:

ನಾನಾ ....?

ನನ್ನ ಫೋಟೋ
"ಜಗತ್ತಿನ ನಾಟಕರಂಗದಲ್ಲಿ ವಿಧಿಯ ಬರವಣಿಗೆಯನ್ನು ಮೀರುವವರು ಯಾರು?" ಅಂತ ಧೃಡವಾಗಿ ನಂಬಿರುವವನು ನಾನು! ನನ್ನಿಂದ ಏನೇ ಆದರೂ ಅದು ನಾನು ಮಾಡಿದ್ದಲ್ಲ,ನನ್ನ ಹಣೆಯಲ್ಲಿ ಬರೆದಿದ್ದುದು ಎಂದು ಹೇಳುವವನು ನಾನು.ಪುಂಗಿ ನಾದಕ್ಕೆ ತಲೆದೂಗಿ ನಡೆವ ನಾಗರಹಾವಂತೆ ,ವಿಧಿ ತೋರ್ಸೋ ದಾರಿಯಲ್ಲಿ ತಲೆ ತಗ್ಗಿಸಿ ನಡೆವ... ನಾನು ಹಣೆಬರಹದ ಮುಂದೆ ಏನು ಮಾಡಕ್ಕಾಗಲ್ಲ,ಹಣೆಲಿ ಏನ್ ಬರೆದಿರೋತ್ತು ಹಾಗೆ ಆಗಲೇ ಬೇಕು ಅದನ್ನ ಬದಲಾಯಿಸಲು ಹರಿ-ಬ್ರಹ್ಮಾದಿಗಳಿಂದಲೂ ಸಾದ್ಯವಿಲ್ಲ ಎಂಬುದು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಮನಸ್ಸು ಮಾಡಿದ್ರೆ ಏನು ಮಾಡಕ್ಕಾಗಲ್ಲ ,ಹಣೆಯಲ್ಲಿ ಬರೆದಿರಬೇಕು ಅನ್ನುವಷ್ಟರ ಮಟ್ಟಿಗೆ ನಾನು ತಲುಪಿದ್ದೇನೆ. ಯಾಕೆಂದರೆ.. ವಿಧಿಗೆ ಸವಾಲ್ ಹಾಕಿ ಕಂಡಿದ್ದು ಬರೀ ಸೋಲಿನ ಸಾಲು........ ನನ್ನೊಂದಿಗೆ:hanebaraha@gmail.com